ಉದ್ದೇಶ ಮತ್ತು ಕಾರ್ಯಚಟುವಟಿಕೆಗಳು:- ಸ್ಥಳೀಯ ಯೋಜನಾ ಪ್ರದೇಶದಲ್ಲಿ ವಿವಿಧ ಭೂಉಪಯೋಗಗಳ ಯೋಜಿತ ಬೆಳವಣಿಗೆ ಮತ್ತು ಅಭಿವೃದ್ಧಿ ಹಾಗೂ ನಗರ ಯೋಜನೆ ಸ್ಕೀಮ್ಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು.
- ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಜನತೆಗೆ ನಾಗರೀಕ ಮತ್ತು ಸಾಮಾಜಿಕ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಯೋಜನೆ ಮತ್ತು ಮಹಾಯೋಜನೆಗಾಗಿ ಸೂಕ್ತ ಪೂರಕ ವಾತಾವರಣವನ್ನು ಕಲ್ಪಿಸುವುದು.
- ಲಾಭ ಮತ್ತು ಸಟ್ಟಾ ವ್ಯಾಪಾರ ಉದ್ದೇಶದ ಅನಿಯಂತ್ರತ ಭೂಅಭಿವೃದ್ಧಿಯನ್ನು ತಡೆಗಟ್ಟುವುದು.
- ಭೂಮಿಯ ಸಮತೋಲಿತ ಬಳಕೆಗಾಗಿ ಹಾಲಿ ವಿಹಾರ, ನಾಗರೀಕ ಸೌಕರ್ಯಗಳನ್ನು ಮತ್ತು ಇತರೆ ಸವಲತ್ತುಗಳನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು.
- ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಜನಜೀವನ ಮಟ್ಟವನ್ನು ಸುಧಾರಿಸುವಲ್ಲಿ ಅಪೇಕ್ಷಿತ ಗುಣಮಟ್ಟದ ಪರಿಸರ, ಆರೋಗ್ಯ ಮತ್ತು ನೈರ್ಮಲ್ಯ ಸಹಿತ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳ ಕ್ರಮಬದ್ಧ ಬೆಳವಣಿಗೆ ದೃಷ್ಠಿಕೋನದೊಂದಿಗೆ ಜನವಸತಿ ಪ್ರದೇಶಗಳ ಭವಿಷ್ಕøತ ಬೆಳವಣಿಗೆಯನ್ನು ನಿರ್ದೇಶಿಸುವುದು.
ಮೂಲ:ಬಿಐಎಎಪಿಎ ಯೋಜನಾ ಪ್ರಾಧಿಕಾರ, ಕರ್ನಾಟಕ ಸರ್ಕಾರ.